ಕ್ಷೇತ್ರದ ಮಹತ್ವ :-
ಈ ಕ್ಷೇತ್ರದ ಮಹತ್ವವನ್ನು ಬಣ್ಣಿಸಲು ಅಸಾದ್ಯ. ಕಾರಣ ಇದು ಸಪ್ತಕ್ಷೇತ್ರ ಅಲ್ಲದೆ ಇದು ಪರಶುರಾಮ ನಿರ್ಮಿತ ಪರಮ ಪಾವನ ಪರಮೇಶ್ವರನು ನೆಲೆನಿಂತು ಪರಮ ಪುಣ್ಯಪ್ರದ ಕೋಟಿತೀರ್ಥ ಇರುವ ಪವಿತ್ರ ಕ್ಷೇತ್ರವಾಗಿದೆ. ಈ ಕ್ಷೇತ್ರದ ಕಾರಣೀಕ ಶಕ್ತಿ ಶ್ರೀ ಕೋಟಿಲಿಂಗೇಶ್ವರನಾಗಿದ್ದಾನೆ. ಈ ದೇವನಿಗೆ ನಾವು ಭಕ್ತಿಯಿಂದ ಬೇಡಿ ನಿಂದರೆ ನಮ್ಮ ಬೇಡಿಕೆಯನ್ನು ಈಡೇರಿಸದೇ ಇರನು. ಶ್ರೀ ಸ್ವಾಮಿ ಇಲ್ಲಿ ಕೋಟಿಲಿಂಗೇಶ್ವರನಾಗಿ ಕೋಟಿ ಫಲವನ್ನು ನೀಡುವ ದೇವರ ದೇವನಾಗಿದ್ದಾನೆ.
ಕೋಟಿ ವರಪ್ರದಾಯಕ ಕೋಟಿಲಿಂಗನ ಬೀಡು ಇದು. ಸರ್ವ ದೇವಾನುದೇವತೆಗಳು ನೆಲೆನಿಂತ ಪರಮ ಪವಿತ್ರ ತಾಣ. ಕೋಟಿಲಿಂಗೇಶ್ವರನಿಗೆ ರುದ್ರಾಭಿಷೇಕ ಅತೀ ಪ್ರೀತಿಯ ಸೇವೆಯಾಗಿದ್ದು ಈ ಸೇವೆಯ ಮೂಲಕ ಭಕ್ತರ ಸಂಕಷ್ಟವನ್ನು ಪರಿಹರಿಸುತ್ತಾನೆ. ಹಾಗೇ ರಂಗಪೂಜೆ, ಹೂವಿನ ಪೂಜೆ ಇನ್ನಿತರ ಪೂಜೆಗಳು ಇಲ್ಲಿ ನಿತ್ಯವೂ ನಡೆಯುತ್ತಾ ಇರುತ್ತದೆ.
ಈ ಪರಮ ಪವಿತ್ರ ಕ್ಷೇತ್ರದಲ್ಲಿ ಇನ್ನೋಂದು ಕಾರಣೀಕ ಶಕ್ತಿ “ಶ್ರೀ ಮೂಲೆಗಣಪತಿ” (moole ganapathi) ದೇವರು. ಈ ಮಹಾಗಣಪತಿಗೆ ಭಕ್ತಿ ಪೂರ್ವಕವಾಗಿ ಬೇಡಿ ನಿಂದರೆ ಎಲ್ಲಾ ಸಂಕಷ್ಟವನ್ನು ನೀಗುತ್ತಾನೆ. ಇವನು ಯಾವ ವಸ್ತುಗಳೇ ಆಗಲಿ ಮೂಲೆ-ಮೂಲೆಯಲ್ಲಿದ್ದರೂ ಕೂಡಾ ಅದನ್ನು ಅರಸಿ ನಮಗೆ ಮರಳಿಸುತ್ತಾನೆ ಎಂಬ ಕಾರಣೀಕದಿಂದ ಇವನಿಗೆ ಅನ್ವರ್ಥವಾಗಿ “ಮೂಲೆ ಗಣಪತಿ” ಎಂದು ಕರೆಯಲಾಗುತ್ತದೆ.
ಪಾರ್ವತಿ ಪರಶಿವನ ಪ್ರೀತಿಯ ಕುವರ ಈ ನಮ್ಮ ಮೂಲೆ ಗಣಪತಿ. ಇವನನ್ನು ಭಕ್ತಿಯಿಂದ ಬೇಡಿದೊಡೆ ನಮ್ಮ ಕಷ್ಟಗಳೂ ನೀಗುವುದು. ನಮ್ಮ ಬೆಲೆಬಾಳುವ ಬಂಗಾರ, ಬೆಲೆ ಬಾಳುವ ಯಾವ ವಸ್ತುಗಳೇ ಆಗಲಿ ಅದನ್ನು ನಮಗೆ ಮರಳಿಸುವ ಪವಾಡ ಮಾಡುವ ದೇವನಾಗಿದ್ದಾನೆ.
ಅದೇ ರೀತಿಯಲ್ಲಿ ಆದಿಶಕ್ತಿ(adhishakthi) ಸ್ವರೂಪಿಣಿಯಾದ ಮಹಾದೇವ ಸತಿ ದುರ್ಗಾಪರಮೇಶ್ವರಿಯಾದ “ಪಾರ್ವತಿ ಅಮ್ಮನವರು”(parvathi ammanavaru) ಇಲ್ಲಿ ಮಹಾ ಚೇತನವಾಗಿ ನೆಲೆನಿಂದಿದ್ದಾಳೆ. ಇವಳಲ್ಲಿ ಆಗದ ಕಾರ್ಯವಿಲ್ಲ. ಇವಳಿಗೆ ಪ್ರೀತಿಯುಕ್ತವಾದ ಸೇವೆ ಕುಂಕುಮಾರ್ಚನೆ ಹಾಗೂ ಹೂವಿನ ಪೂಜೆಗಳು. ಈ ತಾಯಿಯು ಎಲ್ಲಾ ಬಾಧೆಗಳನ್ನು ಕಳೆವ ಮಹಾತಾಯಿ ಆಗಿದ್ದಾಳೆ.
ಅಮ್ಮ ಸರ್ವಶಕ್ತಿಯಾಗಿ ನೆಲೆಸಿ ಸುಮಂಗಲೆಯರ ಸಮಂಗಲಿಯಾಗಿದ್ದಾಳೆ. ಇವಳನ್ನು ಸುಮಂಗಲಿಯರು ವಿಶೇಷವಾಗಿ ಆರಾಧನೆ ಮಾಡುತ್ತಾರೆ. ಈ ದೇವಿ ಸುವಾಚ್ಯನರ್ಚನ ಪ್ರೀತೆಯಾಗಿದ್ದಾಳೆ.
ಅಂತೆ ಈ ಕ್ಷೇತ್ರದಲ್ಲಿ ಸಪ್ತಮಾತೃಕೆಯರು ವೀರಭದ್ರನೊಂದಿಗೆ ಇದ್ಧಾರೆ. ಸುಬ್ರಹ್ಮಣ್ಯ ಸಕಲ ನಾಗದೋಷವನ್ನು ಕಳೆದು ಕಾಯುತ್ತಾನೆ. ಸರ್ವರ ಸಂಕಟ ಹರಿಸುವ ವೆಂಕಟರಮಣ ಇಲ್ಲಿ ಮಹಾಚೇತನವಾಗಿ ನಿಂದಿದ್ದಾನೆ.
ಅದೇ ರೀತಿ ಆದಿಗಣಪತಿ, ಆಂಜನೇಯ, ಮಹಾವಿಷ್ಣು, ಶ್ರೀ ಕೃಷ್ಣರು ಇಲ್ಲಿ ನೆಲೆಸಿ ಶಕ್ತಿಪ್ರದ ಕ್ಷೇತ್ರವನ್ನಾಗಿಸಿ ನೆಲೆನಿಂದಿದ್ದಾರೆ. ಈ ಪರಮ ಪವಿತ್ರ ಕ್ಷೇತ್ರಕ್ಕೆ ನೀವೂ ಒಮ್ಮೆ ಬಂದು ದೇವಾದಿದೇವತೆಗಳ ಕೃಪೆಗೆ ಪಾತ್ರರಾಗಿ.
ಇಲ್ಲಿ ಇಷ್ಟೆ ಅಲ್ಲದೆ ಇಲ್ಲಿ ಮಾಡುವಂತ ದಾನ-ಧರ್ಮಗಳು ಕೋಟಿಫಲವನ್ನು ನೀಡುತ್ತದೆ. ಇಲ್ಲಿನ ಕೋಟಿತೀರ್ಥದಲ್ಲಿ ಪಿಂಡ ಪ್ರದಾನ ಕಾರ್ಯವನ್ನು ಮಾಡಲಾಗುತ್ತದೆ. ಈ ಕ್ಷೇತ್ರವು ಗೋಕರ್ಣ ಕ್ಷೇತ್ರಕ್ಕೆ ಸರಿಸಮಾನವಾಗಿದೆ. ಇಲ್ಲಿ ಸಾಕ್ಷಾತ್ ಕೋಟಿಲಿಂಗೇಶ್ವರನೆ ಕೋಟಿತೀರ್ಥದಲ್ಲಿ ಮುಕ್ಕೋಟಿ ತೀರ್ಥಗಳು ನೆಲೆಯಾಗಲಿ ಎಂದು ಅನುಗ್ರಹಿಸಿದ್ದಾನೆ. ಅಂತೆ ಇಲ್ಲಿ ಮಾಡುವ ಪ್ರತಿಯೊಂದು ಪುಣ್ಯಕಾರ್ಯವು ಕೋಟಿಫಲವನ್ನು ನೀಡುತ್ತದೆ.
“ಸರ್ವರಿಗೂ ಶ್ರೀ ಕೋಟಿಲಿಂಗೇಶ್ವರನು ಅನುಗ್ರಹಿಸಲಿ”