Welcome to Shree Kotilingeshwara Temple, Koteshwara, Kundapura Tq|
ಕನ್ನಡ
ನಾಡಿನ ಪರಶುರಾಮ ನಿರ್ಮಿತ ಸಪ್ತಮುಕ್ತಿ ಕ್ಷೇತ್ರದಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನವು ಮಹತ್ವದ ಸ್ಥಾನವನ್ನು ಪಡೆದ
ಪೌರಾಣಿಕ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ರಾಜ-ಮಹಾರಾಜರು
ಆಳಿದ, ಹಲವಾರು ಋಷಿ-ಮುನಿಗಳಿಂದ ಸೇವಿಸಲ್ಪಟ್ಟ ‘ಧ್ವಜಪುರಾಧಿಶ್ವರ’ ನೆಲೆಸಿರುವ ಈ ಭೂಮಿ ನಿಜಕ್ಕೂ
ಪುಣ್ಯಭೂಮಿಯಾಗಿದೆ. ಜಿಲ್ಲಾ ಕೇಂದ್ರ ಉಡುಪಿಯಿಂದ ಸರಿಸುಮಾರು 35ಕಿ.ಮೀ ಅಂತರದಲ್ಲಿ, ತಾಲೂಕು ಕೇಂದ್ರ
ಕುಂದಾಪುರದಿಂದ ಸುಮಾರು 4ಕಿ.ಮೀ ಅಂತರದಲ್ಲಿ ಈ ದೇವಸ್ಥಾನವಿದೆ. ಇಲ್ಲಿನ ದೇವರು ಶ್ರೀ ಕೋಟಿಲಿಂಗೇಶ್ವರ
ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ. ಹಿಂದೆ ಕೋಟೇಶ್ವರವನ್ನು ‘ಧ್ವಜಪುರ’ ಎಂದು ಕರೆಯಲಾಗುತ್ತಿತ್ತು.
ಹೀಗೆ ಕೋಟಿ ಋಷಿಗಳು ತಪಗೈದ ಪುಣ್ಯಭೂಮಿ ಮಾತ್ರವಲ್ಲದೇ, ಸಾಕ್ಷಾತ್ ಬ್ರಹ್ಮದೇವರು ಶಿವನನ್ನು ಕುರಿತು
ತಪಗೈದ ಪವಿತ್ರ ಇಳೆ ಈ ನಮ್ಮ ಕೋಟೇಶ್ವರ. ಈ ದೇವಾಲಯವು ಪುರಾತನವಾಗಿದ್ದು ಧಾರ್ಮಿಕದತ್ತಿ ಇಲಾಖೆಗೆ
ಸೇರಿದ ‘A’ ದರ್ಜೆಯ ದೇವಸ್ಥಾನವಾಗಿದೆ. ಇಲ್ಲಿನ ಕೋಟಿತೀರ್ಥ ಸರೋವರ ಪ್ರೇಕ್ಷಕರಿಗೂ ಹಾಗೂ ಪುಣ್ಯಪುಷ್ಕರಣಿ
ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ…